ಮುಕ್ತಾಯದ ಹೊಸ್ತಿಲಲ್ಲಿ ಹ್ಯಾಪೀ ಬರ್ತ್‌ಡೇ
Posted date: 14 Thu, Jan 2016 – 08:24:22 AM

ಆಗಸ್ಟ್‌ನಲ್ಲಿ ಆರಂಭಗೊಂಡ ಖ್ಯಾತ ನಿರ್ದೇಶಕ ಕೆ. ಮಹೇಶ್ ಸುಖಧರೆಯವರ ಬಹು ನಿರೀಕ್ಷಿತ ಚಿತ್ರ ಹ್ಯಾಪೀ ಬರ್ತ್‌ಡೇ ಸುಮಾರು ೮೫ ರಿಂದ ೯೫ ದಿನಗಳ ಕಾಲ ಸದ್ದಿಲ್ಲದೆ ಚಿತ್ರೀಕರಣಗೊಂಡು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ.  ಬಹುತೇಕ ಮಂಡ್ಯ ಸುತ್ತಮುತ್ತ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ, ಗ್ರಾಮೀಣ ಸೊಗಡಿನ ಹಿನ್ನೆಲೆಯ ಈ ಚಿತ್ರದಲ್ಲಿ - ಸಂಗೀತ ಮತ್ತು ಸಾಹಸಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಅನ್ನೋದು ಚಿತ್ರ ತಂಡದ ಅಂಬೋಣ.
ತಾರಾಗಣದಲ್ಲಿ ನಾಯಕನಾಗಿ ಸಚಿನ್ (ಹೊಸ ಪರಿಚಯ), ನಾಯಕಿಯಾಗಿ ಸಂಸ್ಕೃತಿ ಶೆಣೈ ಕಾಣಿಸಿಕೊಳ್ಳಲಿದ್ದು, ಪ್ರಮುಖ ಪಾತ್ರಗಳಲ್ಲಿ ಅಚ್ಯುತಕುಮಾರ್, ರವಿಕಾಳೆ, ನೀನಾಸಂ ಅಶ್ವಥ್, ಪ್ರಶಾಂತ್ ಸಿದ್ಧಿ, ರಾಜೇಶ್ ನಟರಂಗ, ಅರುಣ ಬಾಲರಾಜ್, ಅಶ್ವಿನಿ, ಸಾಧುಕೋಕಿಲ, ಚಿಕ್ಕಣ್ಣ, ಬುಲೆಟ್ ಪ್ರಕಾಶ್, ದತ್ತಾತ್ರೇಯ ಮುಂತಾದವರಿದ್ದಾರೆ.     
ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣಕ್ಕೆ ಚಿತ್ರತಂಡ ತಯಾರಿ ನಡೆಸಿದ್ದು, ಸುಮಾರು ೧೦,೦೦೦ ಜನರ ನಡುವೆ ಒಂದು ಸಾಹಸೀ ಜನಪದ ಕಲೆಯ ಸ್ಪರ್ಧೆ ಈ ಚಿತ್ರದ ಹೈಲೈಟ್.  ಯಶಸ್ವೀ ಸಂಭ್ರಮ, ಸೈನಿಕ ಚಿತ್ರಗಳ ನಂತರ ನಿರ್ದೇಶಕ ಕೆ. ಮಹೇಶ್ ಸುಖಧರೆಯವರ ಅತ್ಯುತ್ತಮ ಗ್ರಾಮೀಣ ಸೊಗಡಿನ ಚಿತ್ರ ಇದು ಎಂದು ಹೇಳಲಾಗುತ್ತಿದೆ.
ಹೆಸರಾಂತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಈ ಚಿತ್ರಕ್ಕಾಗಿ ಆರು ತಿಂಗಳಿಂದ ವಿಶೇಷ ಮುತುವರ್ಜಿ ವಹಿಸಿ ಅಪರೂಪದ ರಾಗ ಸಂಯೋಜನೆ ಮಾಡಿದ್ದು, ವಿ. ನಾಗೇಂದ್ರ ಪ್ರಸಾದ್ ನವಿರು ಸಾಹಿತ್ಯದ ಸ್ಪರ್ಶ ನೀಡಿದ್ದಾರೆ.  ಚಿತ್ರಕ್ಕೆ ಸುರೇಶ್ ಜಯಕೃಷ್ಣ ಛಾಯಾಗ್ರಹಣವಿದ್ದು, ರವಿವರ್ಮ, ಥ್ರಿಲ್ಲರ್ ಮಂಜು ಮತ್ತು ಜಾಲಿ ಸೆಬಾಸ್ಟಿನ್ ಸಾಹಸ ಸಂಯೋಜನೆ ಇದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed